ಗಜ಼ಲ್
ಗಜ಼ಲ್
ನನ್ನ ಹೆಜ್ಜೆಯೊಂದಿಗೆ ನೀನೂ ಬರಬಹುದೆಂದು ಊಹಿಸಿರಲಿಲ್ಲ
ಒಬ್ಬಂಟಿ ಪಯಣದಲಿ ಜೊತೆ ಇರಬಹುದೆಂದು ಊಹಿಸಿರಲಿಲ್ಲ
ಹುಟ್ಟು ಸಾವುಗಳ ನಡುವಿನ ಅಂತರ ಸವೆಸಲು ನಡೆಯಬೇಕಲ್ಲ
ಬಳಲಿದೆದೆಗೆ ಒಲವಿನ ಬಲ ಸೇರಬಹುದೆಂದು ಊಹಿಸಿರಲಿಲ್ಲ
ಯಾರಿದ್ದರೇನು ಇಲ್ಲದಿದ್ದರೇನು ನನ್ನ ಹೊಟ್ಟೆಯ ನಾನೇ ತುಂಬಿಸಬೇಕು
ನಿನ್ನ ಪ್ರೀತಿ ಮಾತುಗಳು ಹಸಿವ ನೀಗಬಹುದೆಂದು ಊಹಿಸಿರಲಿಲ್ಲ
ಕಾಣದ ದಾರಿಯ ಕ್ರಮಿಸಿ ಗುರಿ ಸೇರಲು ಆಗದೇನು ನನಗೆ
ಬದುಕಿನ ತಿರುವುಗಳಲ್ಲಿ ಹೂವು ಸಿಗಬಹುದೆಂದು ಊಹಿಸಿರಲಿಲ್ಲ
ನೋವು ನಲಿವುಗಳೇನೇ ಬರಲಿ ನುಂಗಿ ಮುಂದೆ ಸಾಗುತಿರು ಶಿವ
ನಾ ಕಂಡ ಕನಸುಗಳು ಇಂದು ನಗಬಹುದೆಂದು ಊಹಿಸಿರಲಿಲ್ಲ
〽️ಮಹೇಶ್ ಹೆಗಡೆ ಹಳ್ಳಿಗದ್ದೆ
Sooper
ಪ್ರತ್ಯುತ್ತರಅಳಿಸಿಸೂಪರ್..
ಅಳಿಸಿಧನ್ಯವಾದಗಳು ತಮಗೆ 🙏💐
ಅಳಿಸಿ